ವಿಶ್ವವಿದ್ಯಾನಿಲಯದ ಬಗ್ಗೆ

 

ವಿಜಯಪುರ ನಗರದಲ್ಲಿ 2003ರಲ್ಲಿ ಸ್ಥಾಪನೆಯಾದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಜೂನ್ 11, 2017ರಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವೆಂದು ಪುನರ್ ನಾಮಕರಣ ಮಾಡಲಾಗಿದೆ. ಇದು ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯವಾಗಿದ್ದು, ಮಹಿಳೆಯರ ಶಿಕ್ಷಣಕ್ಕಾಗಿಯೇ ಪ್ರತ್ಯೇಕವಾಗಿ ಮೀಸಲಾಗಿದೆ. ಇದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ 2 (ಎಫ್) ಹಾಗೂ 12 (ಬಿ) ಅಧಿನಿಯಮಗಳಡಿಯಲ್ಲಿ ಮಾನ್ಯತೆ ಪಡೆÀದುಕೊಂಡಿದೆ. ಈಗಾಗಲೇ ಮಂಡ್ಯ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ಆರಂಭಿಸಲಾಗಿದ್ದು 2017-18ನೆಯ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವ್ಯಾಪ್ತಿಯನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ನ್ಯಾಕ್‍ನಿಂದ ‘ಬಿ’ ಗ್ರೇಡ್ ಮಾನ್ಯತೆ ದೊರೆತಿದ್ದು ಈ ವರ್ಷ ಕೆಎಸ್‍ಯುಆರ್‍ಎಫ್‍ನಿಂದ 4 ಸ್ಟಾರ್ ದೊರೆತಿದೆ. ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ  ಒಟ್ಟು 158 ಮಹಾವಿದ್ಯಾಲಯಗಳಿದ್ದು ಈ ಮಹಾವಿದ್ಯಾನಿಲಯಗಳಲ್ಲಿ ಕಲಾ, ವ್ಯವಹಾರಿಕ ಆಡಳಿತ, ಗಣಕ ಯಂತ್ರಗಳ ಅನ್ವಯಿಕ, ವಾಣಿಜ್ಯ, ಶಿಕ್ಷಣ, ವಿನ್ಯಾಸ ತಂತ್ರಜ್ಞಾನ, ಗೃಹ ವಿಜ್ಞಾನ, ದೈಹಿಕ ಶಿಕ್ಷಣ, ವಿಜ್ಞಾನ ಮತ್ತು ಸಮಾಜ ಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮುಂತಾದ ಪದವಿ ಕೋರ್ಸುಗಳನ್ನು ನಡೆಸಲಾಗುತ್ತಿದೆ. ಮಹಿಳಾ ವಿಶ್ವವಿದ್ಯಾಲಯವು ಕಲಾ, ವಾಣಿಜ್ಯ ಮತ್ತು ನಿರ್ವಹಣೆ, ಸಾಮಾಜÀ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಶಿಕ್ಷಣ ನಿಕಾಯಗಳಡಿಯಲ್ಲಿ 30 ಸ್ನಾತಕೋತ್ತರ ಪದವಿ, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸುಗಳನ್ನು ನಡೆಸುತ್ತಿದೆ.

 

ದೃಷ್ಟಿಕೋನ, ಘೋಷಣೆ, ಧೇಯೋದ್ದೇಶಗಳು

 

ದೃಷ್ಟಿಕೋನ:

ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ

ಘೋಷಣೆ:

• ಗುಣಾತ್ಮಕ ಶಿಕ್ಷಣ ನೀಡುವುದು ಹಾಗೂ ವೃತ್ತಿಪರ ಮತ್ತು ವೃತ್ತಿಮೂಲ ಕೌಶಲ್ಯಗಳನ್ನು ಬೆಳಸುವುದರೊಂದಿಗೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೇ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಅವರಲ್ಲಿ ಬೆಳೆಸುವುದು.

• ವ್ಯಕ್ತಿತ್ವ ವಿಕಾಸ ಹಾಗೂ ಮುಂದಾಳತ್ವದ ಗುಣಗಳನ್ನು ಪ್ರೋತ್ಸಾಹಿಸುವ ಮೂಲಕ ಸಮಾಜದ ಬಗ್ಗೆ ಸಮತೋಲಿತ ದೃಷ್ಟಿಕೋನವನ್ನು ಬೆಳೆಸುವುದು.

• ಮಹಿಳೆಯರು ತಮ್ಮ ಜ್ಞಾನವನ್ನು ಸಮೃದ್ಧಿಗೊಳಿಸಿಕೊಳ್ಳುವದರಲ್ಲಿ ಮತ್ತು ಜ್ಞಾನಶಕ್ತಿಯ ಲಾಭದ ಫಲಾನುಭವಿಯಾಗುವದರಲ್ಲಿ ಸಹಾಯ ಮಾಡುವದು.

ಧ್ಯೇಯಗಳು:

• ಸಾಂಸ್ಕøತಿಕ ಪರಂಪರೆಯ ಶ್ರೀಮಂತಿಕೆಯನ್ನು, ಆತ್ಮಗೌರವವನ್ನು ವೃತ್ತಿ ಕೌಶಲ್ಯಗಳ ಮೌಲ್ಯಗಳನ್ನು ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಹಾಗೂ ಸಾಂಸ್ಕøತಿಕ ಹಂತಗಳಲ್ಲಿ ಬೆಳೆಸುವದರ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ಅವರು ವೈಯಕ್ತಿಕ ಹಾಗೂ ವೃತ್ತಿದಾಯಕ ಸಂತೃಪ್ತಿ ಜೀವನವನ್ನು ನಡೆಸಲು ಸಹಕಾರಿಯಾಗುವ ಮೌಲಿಕ ಶಿಕ್ಷಣದ ಸುರಕ್ಷತೆ ನೀಡುವುದು.

• ಮಹಿಳೆಯು ತನಗೆ, ತನ್ನ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಮಹತ್ವವೆನಿಸಿದ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವಲ್ಲಿ ಸಮಾನ ಪಾತ್ರ ವಹಿಸುವಂತೆ ಸಜ್ಜುಗೊಳಿಸುವುದು.

• ವಿಜ್ಞಾನ, ಸಾಮಾಜ ವಿಜ್ಞಾನ, ಕಲೆ ಮತ್ತು ಮಾನವ ಶಾಸ್ತ್ರಗಳ ಕುರಿತು ಅದರಲ್ಲೂ ವಿಶೇಷವಾಗಿ ಪ್ರಾದೇಶಿಕ ಮಹತ್ವವನ್ನು ಪಡೆದಿರುವ ವಿಷಯಗಳ ಬಗ್ಗೆ ಪ್ರಗತಿಪರ ಸಂಶೋಧನೆ ನಡೆಸಲು ಪ್ರೋತ್ಸಾಹ ನೀಡುವುದು.

• ಔಪಚಾರಿಕ ಹಾಗೂ ಅನೌಪಚಾರಿಕ ಶಿಕ್ಷಣ ಮತ್ತು ತರಬೇತಿ ಅಲ್ಲದೆ ವಿಸ್ತರಣಾ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನೆಯನ್ನು ತರಲು ಸಹಾಯ ಮಾಡುವುದು, ಜೊತೆಗೆ ಸಮೂಹ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸಲು ಅನುಕೂಲ ಮಾಡಿಕೊಡುವುದು.

ಉದ್ದೇಶಗಳು:

• ಲಿಂಗ ತಾರತಮ್ಯ ನಿವಾರಿಸುವದು.
• ಗ್ರಾಮೀಣ ಮತ್ತು ಹಿಂದುಳಿದ ಮಹಿಳೆಯರನ್ನು ಮುಖ್ಯವಾಹಿನಿಗೆ ಸೇರುವಂತೆ ಸಹಾಯ ಮಾಡುವುದು.
• ಸಮಾಜದ ಎಲ್ಲ ಸ್ತರಗಳಲ್ಲಿ ಮಹಿಳೆಯರು ಪರಿಣಾಮಕಾರಿ ಮತ್ತು ರಚನಾತ್ಮಕ ಪಾತ್ರ ನಿರ್ವಹಿಸುವಂತೆ ಸಮರ್ಥರಾಗಲು ಪ್ರೇರಣೆ ನೀಡುವುದು.