ಸುತ್ತೋಲೆಗಳು

View all
ಕರಾಅಮವಿವಿ ಗೆ ಸ್ವಾಗತ

 

ಪ್ರದೇಶದ ಅಗತ್ಯಗಳನ್ನು ಆಧರಿಸಿ ವಿಶ್ವವಿದ್ಯಾಲಯವು ಈಗಾಗಲೇ ಈ ವಿಷಯಗಳಲ್ಲಿ ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಿದೆ.

ಕಲಾ ವಿಭಾಗ
ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮತ್ತು ಪ್ರದರ್ಶನ ಕಲೆಗಳು
 
ಸಮಾಜ ವಿಜ್ಞಾನ ವಿಭಾಗ
ಮಹಿಳಾ ಅಧ್ಯಯನ,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಾಮಾಜ ಕಾರ್ಯ,ಇತಿಹಾಸ, ರಾಜ್ಯಶಾಸ್ತ್ರ
 
ವಿಜ್ಞಾನ ವಿಭಾಗ
ಜೈವಿಕಮಾಹಿತಿವಿಜ್ಞಾನ, ಜೈವಿಕ ತಂತ್ರಜ್ಞಾನ, ಔಷಧೀಯ ರಸಾಯನಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ,ಆಹಾರ ಸಂಸ್ಕರಣೆ ಮತ್ತು ಪೌಷ್ಟಿಕತೆ,ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ,
 
ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಅಧ್ಯಯನ
ವಾಣಿಜ್ಯ ಮತ್ತು ವ್ಯವಹಾರ ಆಡಳಿತ
 
ಶಿಕ್ಷಣ ವಿಭಾಗ
ಶಿಕ್ಷಣ ಮತ್ತು ದೈಹಿಕ ಶಿಕ್ಷಣ
 
ಪಿಎಚ್.ಡಿ.
ಈ ವಿಷಯಗಳಲ್ಲಿ ಪಿಎಚ್.ಡಿ. ಪದವಿಗಾಗಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ, ಇಂಗ್ಲಿಷ್, ಮಹಿಳಾ ಅಧ್ಯಯನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಮಾಜಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಜೈವಿಕ ಮಾಹಿತಿವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಔಷಧೀಯ ರಸಾಯನಶಾಸ್ತ್ರ, ವ್ಯವಹಾರಾಡಳಿತ (ಎಂಬಿಎ), ಎಂ.ಕಾಮ್, ಶಿಕ್ಷಣ ಮತ್ತು ದೈಹಿಕ ಶಿಕ್ಷಣ
 
ಎಂ.ಫಿಲ್.
ಈ ವಿಷಯಗಳಲ್ಲಿ ಎಂ.ಫಿಲ್. ಪದವಿಗಾಗಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ, ಇಂಗ್ಲಿಷ್, ಮಹಿಳಾ ಅಧ್ಯಯನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಮಾಜಕಾರ್ಯ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಔಷಧೀಯ ರಸಾಯನಶಾಸ್ತ್ರ, ವ್ಯವಹಾರಾಡಳಿತ ಅಧ್ಯಯನ (ಎಂ.ಬಿ.ಎ.), ಎಂ.ಕಾಮ್, ಶಿಕ್ಷಣ ಮತ್ತು ದೈಹಿಕ ಶಿಕ್ಷಣ.
 
ಈ ಶೈಕ್ಷಣಿಕ ವರ್ಷದಿಂದ ವಾತಾವರಣಕ್ಕೆ ಪೂರಕವಾಗಿರುವ ರೀತಿಯಲ್ಲಿ ಪರಿಸರಪ್ರೇಮಿ ವಾಸ್ತುಶಿಲ್ಪ ಮತ್ತು ಭೂದೃಶ್ಯಗಳನ್ನ ವಿನ್ಯಾಸಗೊಳಿಸಲಾಗಿದೆ. ವಿಶ್ವವಿದ್ಯಾನಿಲಯವು ಸೆಮಿಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಆಂತರಿಕ ಮತ್ತು ಸತತ ಮೌಲ್ಯಮಾಪನವನ್ನು ಮಾಡಲಾಗುತ್ತದೆ. ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿವೇತನ ನೀಡುವ ಉದ್ದೇಶವನ್ನು ಹೊಂದಿದೆ. ಎಂ.ಫಿಲ್- ಪಿಎಚ್.ಡಿ. ಅಧ್ಯಯನ ನಡೆಸುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಹಲವು ಕೋರ್ಸುಗಳ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಗೆ ಅತ್ಯಲ್ಪ ಪ್ರಮಾಣದ ಶುಲ್ಕ ನಿಗದಿ ಪಡಿಸಲಾಗಿದೆ.
ಅತ್ಯಂತ ವೇಗದ ಮತ್ತು ಸತತ ಅಂತರ್ಜಾಲ ವ್ಯವಸ್ಥೆ ಒದಗಿಸುವುದಕ್ಕೆ 1 ಜಿಬಿಪಿಎಸ್ ಲೀಸ್ ಲೈನ್ಅನ್ನು ವಿಶ್ವವಿದ್ಯಾನಿಲಯವು ಅಳವಡಿಸಿದೆ. ಸಂಶೋಧನೆಗೆ ಪೂರಕ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸುಸಜ್ಜಿತ ಮತ್ತು ಅತ್ಯಾಧುನಿಕ ಪ್ರಯೋಗಾಲಯಗಳ ವ್ಯವಸ್ಥೆ, ಗಣಕಯಂತ್ರ ಮತ್ತು ಗ್ರಂಥಾಲಯಗಳಂತಹ ಸೌಲಭ್ಯ ಕಲ್ಪಿಸಲಾಗಿದೆ. ವಿಶ್ವವಿದ್ಯಾನಿಲಯದ ಆವರಣವು ‘ಹಸಿರು ಆವರಣ’ ಪರಿಕಲ್ಪನೆಗೆ ಅನುಗುಣವಾಗಿರುವಂತೆ ಎಲ್ಲ ಕಟ್ಟಡಗಳನ್ನು ಪರಿಸರಸ್ನೇಹಿಯಾಗಿ ನಿರ್ಮಿಸಲಾಗಿದೆ.
ಮುಕ್ತ ಶೈಕ್ಷಣಿಕ ವಾತಾವರಣದಲ್ಲಿ ಕಲಿಯುವ, ಅಧ್ಯಯನ ನಡೆಸುವ ಅನನ್ಯ ಅವಕಾಶವನ್ನು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಕಲ್ಪಿಸಿದೆ. ಬೋಧಕ ಸಿಬ್ಬಂದಿಗೆ ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಬೋಧಕ ಸಿಬ್ಬಂದಿಯನ್ನು ಆರಂಭದಿಂದಲೂ ಸಂಸ್ಥೆಯ ನಿರ್ಮಾಣದಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳಲಾಗಿದೆ. 

ಕುಲಪತಿಗಳ ಕಕ್ಷೆಯಿಂದ...

ಮಹಿಳೆಯರ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಅವಕಾಶಗಳ ಹೆಬ್ಬಾಗಿಲು ತೆರೆಯುವುದರೊಂದಿಗೆ ಸರ್ವಾಂಗೀಣ ಪ್ರಗತಿಯತ್ತ ಮುನ್ನಡೆಯುತ್ತಿದೆ.
ಹೆಚ್ಚು ಒಧಿ..


ಎಲ್ಲವನ್ನೂ ವೀಕ್ಷಿಸಿ

ನಮ್ಮ ಗ್ಯಾಲರಿ

AWUV ಮಾಧ್ಯಮದಲ್ಲಿ